ನಾರ್ಮನ್ ಬೊರ್ಲಾಗ್ (ಮಾರ್ಚ್ ೨೫,೧೯೧೪ – ಸೆಪ್ಟೆಂಬರ್ ೧೨,೨೦೦೯) ಅಮೆರಿಕದ ಜೀವಶಾಸ್ತ್ರಜ್ಞ. ಇವರು ಒಬ್ಬ ಮಹಾನ್ ಮಾನವತಾವಾದಿ.ಇವರನ್ನು "ಹಸಿರುಕ್ರಾಂತಿ ಯ ಪಿತಾಮಹ","ಕೃಷಿಯ ಅತ್ಯಂತ ಮೇಧಾವಿ ವಕ್ತಾರ" "ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ ಮಹಾನುಭಾವ" ಎಂದೂ ಕರೆಯಲಾಗುತ್ತಿತ್ತು. ಇವರಿಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ನೊಬೆಲ್ ಶಾಂತಿ ಪುರಸ್ಕಾರ, ಭಾರತದಲ್ಲಿ ಹಸಿರುಕ್ರಾಂತಿಗಾಗಿ ಇವರ ಕೊಡುಗೆಗೆ ಪದ್ಮ ವಿಭೂಷಣ ದೊರೆತಿದೆ. === ಹಸಿರುಕ್ರಾಂತಿಯ ಹರಿಕಾರ === ಜಗತ್ತಿನ ಹಸಿವು ನೀಗಿಸುವ ಆಹಾರ ದಾನ್ಯಗಳ ಮುಖ್ಯವಾಗಿ ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ನಾರ್ಮನ್ ಬೊರ್ಲಾಗ್‍ರವರ ಸಂಶೋಧನೆ ಕ್ರಾಂತಿಯನ್ನೆ ಉಂಟುಮಾಡಿದೆ. ಮೆಕ್ಸಿಕೋ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಇವರ ಸಂಶೋಧನೆಯ ಫಲವಾಗಿ ಉತ್ಪಾದನೆಯು ಸುಮಾರು ಮೂರುಪಟ್ಟಿಗಿಂತಲೂ ಹೆಚ್ಚಾಯಿತು. ಇದರಿಂದಾಗಿ ಈ ಪ್ರದೇಶಗಳು ಆಹಾರ ಸ್ವಾವಲಂಬಿಗಳಾಗಲು ಸಹಕಾರಿಯಾಯಿತು.